ಭಟ್ಕಳ, ಜನವರಿ 21: ಎರಡು ಲಾರಿಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಮಂಗಳವಾರ ರಾತ್ರಿ ೧೨ ಗಂಟೆಯ ಸುಮಾರಿಗೆ ಪುಷ್ಪಾಂಜಲಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ನಡೆದಿದೆ.
ಗಾಯಗೊಂಡವರನ್ನು ಭಟ್ಕಳದಿಂದ ಮಂಗಳೂರಿನೆಡೆಗೆ ಚಲಿಸುತ್ತಿದ್ದ ಲಾರಿಯ (ಜಿಜೆ೧೧ಡಬ್ಲ್ಯೂ ೪೯೫೦) ಕ್ಲೀನರ್ ಪಾಷಾ ಬಾಯಿ ಹಾಗೂ ಕೋಕ್ ತುಂಬಿಕೊಂಡು ಮಂಗಳೂರಿನಿಂದ ಹುಬ್ಬಳ್ಳಿಯ ಕಡೆ ಪ್ರಯಾಣ ಬೆಳೆಸಿದ್ದ ಲಾರಿಯಲ್ಲಿದ್ದ (ಕೆಎ೧೯ಎ ೪೧೯೯) ಸೌಖತ್ ತಂದೆ ಯೂಸುಫ್ ಮತ್ತು ಆಸೀಫ್ ಎಂದು ಗುರುತಿಸಲಾಗಿದೆ. ಪಾಷಾ ಭಟ್ಕಳದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರೆ, ಶೌಖತ್ ಮತ್ತು ಆಸೀಫ್‌ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸೈ ಕರ್ನಿಂಗ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.